ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೆಸರಿನಲ್ಲಿ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಉಪಾಯ ಮೈಸೂರಲ್ಲುಂಟು..!
1 min read
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಮ್ಮ ಮೈಸೂರಿಗೆ ಅವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೆಸರಿನಲ್ಲಿ ಮೈಸೂರಿನಲ್ಲಿ ಪ್ರವಾಸಿ ತಾಣವೊಂದು ಉದ್ಘಾಟನೆಯಾಗಿದೆ. ಅದೇ “ಶ್ರೀಮಾನ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ನೋ ಸಿಟಿ”. ಸ್ನೋ ಸಿಟಿ ಎಂದರೆ ನಮಗೆಲ್ಲಾ ಥಟ್ಟನೆ ನೆನಪಾಗೋದು ವಿದೇಶದಲ್ಲಿರುವ ಮಾನವ ನಿರ್ಮಿತ ಸ್ನೋ ಸಿಟಿಗಳು. ಇಲ್ಲವಾದರೆ ಬೆಂಗಳೂರು, ಹೈದರಾಬಾದ್ ನಲ್ಲಿರುವ ಸ್ನೋ ಸಿಟಿಗಳು. ಆದರೆ ಈಗ ಈ ಪರಿಕಲ್ಪನೆ ಬದಲಾಗಲಿದೆ. ನಮ್ಮ ಮೈಸೂರು ಮಂಜಿನ ನಗರಿ ಕೂಡ ಹೌದು. ಯಾವಾಗಲೂ ಕೂಲ್ ಕೂಲ್ ಆಗಿರುವ ಮೈಸೂರಿನಲ್ಲಿ ಈಗ ಸ್ನೋ ಸಿಟಿ ನಿರ್ಮಾಣವಾಗಿದೆ. ಮೊದಲಿನಿಂದಲೇ ಪ್ರವಾಸಿ ತಾಣಗಳಿಂದ ತುಂಬಿ ತುಳುಕುತ್ತಿರುವ ಮೈಸೂರಿಗೆ ಇದು ಹೊಸ ಸೇರ್ಪಡೆ. ನಮ್ಮ ಸಾಂಸ್ಕೃತಿಕ ನಗರಿಯ ಎಲ್ಲಾ ಸ್ಥಳಗಳಿಗೂ ಇರುವಂತೆ ಇದಕ್ಕೂ ಐತಿಹಾಸಿಕ ಹಿನ್ನಲೆಯಿದೆ. ಸ್ನೋ ಸಿಟಿ ನಿರ್ಮಾಣವಾಗಿದ್ದರ ಹಿಂದೆಯೂ ಒಂದು ಅದ್ಭುತ ಇತಿಹಾಸ ಇದೆ. ಅದರೊಂದಿಗೆ ರಾಜಮನೆತನದ ಕೊಡುಗೆ ಕೂಡ ಇದರೊಂದಿಗೆ ತಳಕು ಹಾಕಿಕೊಂಡಿದೆ.
ಮೈಸೂರಿನಲ್ಲಿ ಹಲವಾರು ಚಿತ್ರಮಂದಿರಗಳಿವೆ. ಪುರಾತನ ಕಾಲದಿಂದ ಜನರಲ್ಲಿದ್ದ ಚಿತ್ರಾಸಕ್ತಿಗೆ ಸಾಕ್ಷಿಯಾಗಿದೆ. ಅದರಲ್ಲೊಂದು ರೀಜೆನ್ಸಿ ಥಿಯೇಟರ್. ರೀಜೆನ್ಸಿ ಚಿತ್ರಮಂದಿರ ಇತಿಹಾಸ ಪ್ರಸಿದ್ಧವಾದುದು. ಇನ್ನೊಂದು ವಿಶೇಷ ಅಂದರೆ ಇದು ರಾಜಮನೆತನದವರ ಒಡೆತನದಲ್ಲಿತ್ತು. ಆಗಿನ ಕಾಲದಲ್ಲಿ ಮೈಸೂರಿನಲ್ಲಿ ಮಲ್ಟಿಪ್ಲೆಕ್ಸ್’ಗಳು ಇರಲಿಲ್ಲ. ಎಲ್ಲರೂ ಮಾಮೂಲಿ ಥಿಯೇಟರ್ ಗಳಲ್ಲಿ ಚಲನಚಿತ್ರ ನೋಡುತ್ತಿದ್ದರು. ಆದರೆ ಬರುಬರುತ್ತಾ ಬೇರೆ ಸ್ಥಳಗಳಂತೆ ಮೈಸೂರಿನಲ್ಲಿಯೂ ಮಲ್ಟಿಪ್ಲೆಕ್ಸ್ ಗಳು ತಲೆಯೆತ್ತಲಾರಂಭಿಸಿದವು. ಜನರು ಸಂಪೂರ್ಣವಾಗಿ ಮಲ್ಟಿಪ್ಲೆಕ್ಸ್ ಸಂಸ್ಕೃತಿಯತ್ತ ಹೋಗದಿದ್ದರೂ ಸಹ ಥಿಯೇಟರ್ ಗಳಿಗೆ ಸಿನಿಮಾ ನೋಡಲು ಬರುತ್ತಿದ್ದವರ ಸಂಖ್ಯೆ ಕ್ರಮೇಣ ಕಡಿಮೆಯಾಯಿತು. ಈ ಕಾರಣ ಕೆಲವು ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರಮಂದಿರಗಳು ಬಾಗಿಲು ಮುಚ್ಚುವಂತಾಯಿತು. ಅವುಗಳ ಪೈಕಿ ರೀಜೆನ್ಸಿ ಥಿಯೇಟರ್ ಕೂಡ ಒಂದು. ಮೈಸೂರಿನಲ್ಲಿ ರೀಜೆನ್ಸಿ ಥಿಯೇಟರ್ ಇರುವುದು ನಜರ್’ಬಾದ್ ಬಳಿ. ಮೈಸೂರು ಮೃಗಾಲಯದ ಬಳಿ ಇದ್ದ ಈ ರೀಜೆನ್ಸಿ ಥಿಯೇಟರ್ ಈಗ ಹೊಸ ರೂಪ ಪಡೆದುಕೊಂಡಿದೆ. ಮೈಸೂರಿನಲ್ಲಿರುವ ಸಾಲು ಸಾಲು ಪ್ರವಾಸಿ ತಾಣಗಳ ಪಟ್ಟಿಗೆ ಇದೂ ಸೇರಿಕೊಂಡಿದೆ.
ಆಗಿನ ರೀಜೆನ್ಸಿ ಥಿಯೇಟರೇ ಈಗಿನ ಸ್ನೋ ಸಿಟಿ. ಹೌದು..ಭಾರತದಲ್ಲಿ ಬೆಂಗಳೂರು, ಹೈದರಾಬಾದ್ ನಂತಹ ನಗರಗಳಲ್ಲಿರುವ ಸ್ನೋ ಸಿಟಿ ಈಗ ಮೈಸೂರಿನಲ್ಲೂ ತಲೆಯೆತ್ತಿದೆ. ಏಪ್ರಿಲ್ 14ರಂದು ನಜರ್’ಬಾದ್ ನ ಲೋಕರಂಜನ್ ಮಹಲ್ ರಸ್ತೆಯಲ್ಲಿ ಸ್ನೋ ಸಿಟಿ ಉದ್ಘಾಟನೆಯಾಯಿತು. ಇದರ ಪೂರ್ಣ ಹೆಸರು “ಶ್ರೀಮಾನ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ನೋ ಸಿಟಿ”. ಇದನ್ನ ಉದ್ಘಾಟನೆ ಮಾಡಿದವರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್.

ರೀಜೆನ್ಸಿ ಥಿಯೇಟರ್ ರಾಜವಂಶದವರಿಗೆ ಸೇರಿದ ಜಾಗ. ಇವರೊಂದಿಗೆ ಒಪ್ಪಂದ ಮಾಡಿಕೊಂಡ ಮೂವರು ಉದ್ಯಮಿಗಳು ಸ್ನೋ ಸಿಟಿ ಸ್ಥಾಪನೆ ಮಾಡಿದರು. ವಿನೋದ್ ಸಬರ್ವಾಲ್, ಸನ್ನಿ ಸಬರ್ವಾಲ್ ಹಾಗೂ ಯಶ್ವಂತ್ ಜೈನ್ ಎಂಬ ಮೂವರು ಇದರ ಸೃಷ್ಟಿಕರ್ತರು. 10 ಸಾವಿರ ಚದರ ಅಡಿ ಜಾಗದಲ್ಲಿ ಶುರುವಾಗಿರುವ ಸ್ನೋ ಸಿಟಿಗೆ ನಿರ್ಮಾಣವಾಗಿರುವುದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿರುವ ಕ್ರೆಮ್ಲಿನ್ ನಂತೆ. ಕ್ರೆಮ್ಲಿನ್ ಎಂದರೆ ರಷ್ಯಾದ ಮಾಸ್ಕೋದಲ್ಲಿರುವ ಪ್ರತಿಷ್ಟಿತ ಕಟ್ಟಡ. ಇದು ಪ್ರಪಂಚದಲ್ಲೇ ಹೆಸರು ಮಾಡಿರುವ ಅಪರೂಪದ ಕಟ್ಟಡ. ಆದ್ದರಿಂದಲೇ ಇದು ಮೈಸೂರಿಗರಿಗೆ ಅಚ್ಚುಮೆಚ್ಚಾಗಿದೆ. ಇದರ ಬಗ್ಗೆ ಒಂದಷ್ಟು ವಿಶೇಷ ವಿಚಾರಗಳಿವೆ. ಅದನ್ನ ನೀವು ತಿಳಿಯಲೇಬೇಕು.
ವಿಳಾಸ: ಶ್ರೀಮಾನ್ ಶ್ರೀಕಂಠದತತ್ ನರಸಿಂಹರಾಜ ಒಡೆಯರ್ ಸ್ನೋ ಸಿಟಿ
ನಜರ್ ಬಾದ್, ಮೈಸೂರು
ಮೃಗಾಲಯದ ಹತ್ತಿರ, ವಸಂತ ಮಹಲ್ ರಸ್ತೆ, ಮೈಸೂರು.
- ಸ್ನೋ ಸಿಟಿ ನಿರ್ಮಾಣವಾಗಿರುವುದು ಬರೋಬ್ಬರಿ 10 ಸಾವಿರ ಚದರ ಅಡಿ ಜಾಗದಲ್ಲಿ. ಇದನ್ನು ನಿರ್ಮಾಣ ಮಾಡಲು ಕೊಲ್ಕತ್ತಾ, ಮುಂಬೈ. ಚೆನ್ನೈನಿಂದ ನುರಿತ 120 ಮಂದಿ ಕೆಲಸಗಾರರನ್ನು ಕರೆಸಲಾಗಿತ್ತು.
- ಸ್ನೋ ಸಿಟಿ ಮುಂಭಾಗದಲ್ಲಿ ಕ್ರೆಮ್ಲಿನ್ ಕಟ್ಟಡದ ಅಣಕನ್ನ ತಯಾರು ಮಾಡಲಾಗಿದೆ. ಇಲ್ಲಿ ಸೆಲ್ಫಿ ಝೋನ್ ಕೂಡ ಇದೆ. ಸ್ವತಃ ನೀವೇ ರಷ್ಯಾಗೆ
ಹೋಗಿ ಸೆಲ್ಫಿ ತೆಗೆದುಕೊಂಡ ಬಂದ ಹಾಗೆ ಆಗದಿದ್ದರೂ ಖುಷಿಯಂತೂ ಆಗುತ್ತದೆ. - ಒಳಗೆ ಹೋಗುವ ಮುನ್ನ ಬೆಚ್ಚಗಿರುವ
ಶೂಗಳು, ಜಾಕೆಟ್ ಗಳು, ಕೈ ಕವಚ, ಹೆಲ್ಮೆಟ್, ಎಲ್ಲವನ್ನೂ ಅಲ್ಲೇ ಒದಗಿಸಲಾಗುತ್ತದೆ. - ಹೊರಗಿನ ತಾಪಮಾನ ಎಷ್ಟೇ
ಇದ್ದರೂ ಇದರೊಳಗೆ ಮಾತ್ರ ಸದಾ -6 ಅಥವಾ -7 ಡಿಗ್ರಿ ತಾಪಮಾನವನ್ನು ಕಾಯ್ದುಕೊಳ್ಳಲಾಗಿದೆ. ಇದು
ನಿಜವಾಗಿಯೂ ಮಂಜಿನ ಮಧ್ಯೆ ಇರುವ ಅನುಭವ ಕೊಡುತ್ತದೆ. - ಒಳಗಿರುವುದು ಕೃತಕ
ಮಂಜಾದರೂ ಅದನ್ನು ಬಿಸ್ಲೆರಿ ಅಥವಾ ಶುದ್ಧೀಕರಿಸಿದ ನೀರಿನಿಂದ ತಯಾರು ಮಾಡಲಾಗಿರುತ್ತದೆ. ಆದ್ದರಿಂದ
ಇದರಲ್ಲಿ ಆಟವಾಡಿದ ಮೇಲೆ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. - ಆಯಾ ಹಬ್ಬಕ್ಕೆ, ಕಾಲಗಳಿಗೆ
ತಕ್ಕಂತೆ ಒಳಗೆ ವಿನ್ಯಾಸಗಳನ್ನು ಆಕರ್ಷಕವಾಗಿ ಬದಲಾಯಿಸಲಾಗುತ್ತದೆ, ಹಬ್ಬಗಳಿಗೆ ಅನುಗುಣವಾಗಿ
ಅಲಂಕಾರ ಮಾಡಲಾಗುತ್ತದೆ ಎನ್ನುತ್ತಾರೆ ಅಲ್ಲಿನ ವ್ಯವಸ್ಥಾಪಕರು. - ಪರ್ವತಗಳನ್ನು ಏರುವುದು,
ಸ್ನೋ ಬಾಲಿಂಗ್, ಸ್ನೋ ಸ್ಲೈಡಿಂಗ್, ಡಿಜೆ ಹಾಡಿನೊಂದಿಗೆ ಸ್ನೋ ಡಿಸ್ಕೋ, ಸ್ಲೆಡ್ಜಿಂಗ್,
ಸ್ನೋಬಾಲ್ ಥ್ರೋಯಿಂಗ್, ಸ್ನೋ ಬೈಕ್, ಸ್ನೋ ಹೋಟೆಲ್, ಐಸ್ ಹೌಸ್ ನೃತ್ಯ..ಮುಂತಾದ ಆಕರ್ಷಣೆಗಳು
ಇಲ್ಲಿವೆ. ಜೊತೆಗೆ ಆಟವಾಡುವಾಗ ಯಾವುದೇ ಅಪಾಯ ಆಗದಂತೆ ನೋಡಿಕೊಳ್ಳಲು ಜನರಿರುತ್ತಾರೆ. - ಒಳಗೆ ಹೋಗುವವರು ಕ್ಯಾಮರಾ,
ಫೋನ್ ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಫೋಟೋ ತೆಗೆಯಲಿಕ್ಕೆಂದೇ ಅಲ್ಲಿ
ಜನರಿರುತ್ತಾರೆ.
ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಮೈಸೂರಿನ ಸ್ನೋ
ಸಿಟಿ ಈ ಬೇಸಿಗೆಗೆ ಅತ್ಯುತ್ತಮ ತಾಣ. 45 ನಿಮಿಷಗಳ ಅವಧಿಗೆ ಇಲ್ಲಿ ಮೈಸೂರಿಗರಿಗೆ ವಾರದ
ದಿನಗಳಲ್ಲಿ 250, ವಾರಾಂತ್ಯದಲ್ಲಿ 300 ರೂಪಾಯಿ ಪ್ರವೇಶ ಶುಲ್ಕ. ಹೊರಗಿನವರಿಗೆ ವಾರದ
ದಿನಗಳಲ್ಲಿ 350, ವಾರಾಂತ್ಯದಲ್ಲಿ 400 ರೂಪಾಯಿ ಪ್ರವೇಶ ಶುಲ್ಕ. ಪಾರ್ಕಿಂಗ್ ಗೆ ಬೇರೆ ಶುಲ್ಕ
ಇರುತ್ತದೆ. ಈಗ ಹೇಗೂ ಸಾಲು ಸಾಲು ರಜೆ ಇದೆ. ಒಮ್ಮೆ ಈಕಡೆ ಹೋಗಿ ಬನ್ನಿ.ಹಳೆಯ ಪುರಾತನ ಕಟ್ಟಡದ
ಪರಂಪರೆಗೆ ಧಕ್ಕೆ ಬಾರದಂತೆ ಅದನ್ನು ಆಧುನೀಕರಣಗೊಳಿಸುವುದು ಹೇಗೆ ಎಂದು ತಿಳಿಯುವುದು ನಮ್ಮ
ಮೈಸೂರನ್ನು ನೋಡಿದಾಗ ಮಾತ್ರ.. ಈಗ ತಾನೆ ಉದ್ಘಾಟನೆಯಾಗಿರುವ ಸ್ನೋ ಸಿಟಿಗೆ ಹೋಗಿ. ಕೊಟ್ಟ
ಹಣಕ್ಕಂತೂ ಖಂಡಿತ ಮೋಸ ಇರುವುದಿಲ್ಲ.