Wed. Jul 8th, 2020

Namma Mysuru

History, News, Stories and much more

ಶತಮಾನದ ಸಾಬೂನಿನ ಹಿಂದಿದೆ ಸುಂದರ ಕಥೆ.

1 min read
<!-- wp:paragraph --> <p>ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ನಿತ್ಯಕ್ರಮಗಳನ್ನ ಮುಗಿಸಿ ಚೆನ್ನಾಗಿ ರೆಡಿಯಾಗಿ ಕೆಲಸಕ್ಕೋ, ಸ್ಕೂಲಿಗೋ, ಕಾಲೇಜಿಗೋ ಹೊರಟರೆ ದಿನ ಚೆಂದವಾಗಿರುತ್ತೆ. ಆದರೆ ಈಗ ಎಲ್ಲರೂ ಅವಸರದಲ್ಲಿ ಬದುಕುತ್ತಾರೆ. ಮನೆಗೆ ಬರುವುದು, ಕೆಲಸ ಮುಗಿಸಿ ಮಲಗುವುದು, ಬೆಳಿಗ್ಗೆ ಏಳುವುದೂ ತಡವಾಗುತ್ತದೆ. ಆ ಕಾರಣಕ್ಕೆ ಎಷ್ಟೋ ಜನ ಎದ್ದು ಸ್ನಾನ ಮಾಡುವ ಗೋಜಿಗೂ ಹೋಗುವುದಿಲ್ಲ. ಮುಖ ತೊಳೆದು ಡಿಯೋಡ್ರೆಂಟ್ ಹಾಕಿ ಕೆಲಸಕ್ಕೆ ಓಡುತ್ತಾರೆ. ಇದು ಸಾಮಾನ್ಯವಾಗಿ ಇಂದಿನ ಪೀಳಿಗೆಯ ಜನರ ದಿನಚರಿ. ಆದರೆ ಮೈಸೂರಿಗರ ದಿನಚರಿ ಹೀಗಿರುವುದಿಲ್ಲ ನೋಡಿ.. ಬಹುಪಾಲು ಮೈಸೂರಿಗರು ಯಾವುದಕ್ಕೂ ಹರಿಬರಿ ಮಾಡಿಕೊಳ್ಳುವುದಿಲ್ಲ. ಹೋಗುವ ಸ್ಥಳಕ್ಕೆ ಒಂದ್ಹತ್ತು ನಿಮಿಷ ತಡವಾಗಿ ತಲುಪಿದರೂ ಪರವಾಗಿಲ್ಲ, ಮಾಡುವ ಕೆಲಸವನ್ನೆಲ್ಲಾ ಮುಗಿಸಿ ಶಾಂತಿಯಿಂದ ಹೋಗಬೇಕಾದ ಸ್ಥಳಕ್ಕೆ ಹೋಗುತ್ತಾರೆ.</p> <!-- /wp:paragraph --> <!-- wp:paragraph --> <p>ಇಷ್ಟೆಲ್ಲಾ ಹೇಳಿದ್ದು ಯಾಕೆ ಅಂದರೆ ಮೈಸೂರು ಜನರಿಗೆ ದಿನ ಸಂಪೂರ್ಣವಾಗಿ, ಉಲ್ಲಾಸಭರಿತವಾಗಿ ಶುರುವಾಗಿದೆ ಅನ್ನಿಸೋದು ಯಾವುದೋ ದುಬಾರಿ ಸುಗಂಧದ್ರವ್ಯಗಳನ್ನು ಪೂಸಿಕೊಂಡು ದಿನವನ್ನ ಶುರುಮಾಡಿದಾಗಲಲ್ಲ. ಬದಲಿಗೆ ಮೈಸೂರು ಸ್ಯಾಂಡಲ್ ಸಾಬೂನಿನಿಂದ ಸ್ನಾನ ಮಾಡಿ ಮನೆಯಿಂದ ಹೊರಟಾಗ. ಆಹಾ..! ಆ ಮೃದು ತ್ವಚೆ, ನುಣುಪಾದ ದೇಹ, ಅತ್ಯಂತ ಸುಗಂಧಭರಿತ ಶ್ರೀಗಂಧದ ವಾಸನೆ..ಇಷ್ಟೆಲ್ಲಾ ಒಟ್ಟಿಗೆ ಸಿಗೋದು ನಮ್ಮ ಮೈಸೂರು ಸ್ಯಾಂಡಲ್ ಸೋಪ್ ನಲ್ಲಿ ಮಾತ್ರ. ಮೈಸೂರು ಬ್ರ್ಯಾಂಡ್ ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಕೂಡಾ ಪ್ರಮುಖವಾದುದು. ಸ್ಯಾಂಡಲ್ ಸಾಬೂನು ಮಾತ್ರವಲ್ಲ, ಗಂಧದ ಎಣ್ಣೆ, ಪೌಡರ್, ಡಿಟರ್ಜೆಂಟ್, ಅಗರಬತ್ತಿಗಳು ಕೂಡಾ ಸಿಗುತ್ತವೆ. ಮೈಸೂರಿನ ಭವ್ಯ ಇತಿಹಾಸ ಬಿಂಬಿಸುವ ಈ ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೇ ಪ್ರತ್ಯೇಕವಾದ, ಬರೋಬ್ಬರಿ 102 ವರ್ಷಗಳ ಇತಿಹಾಸ ಇದೆ.</p> <!-- /wp:paragraph --> <!-- wp:paragraph --> <p>ಅದು ಮೊದಲನೇ ಮಹಾಯುದ್ಧ ಸಮಯ. ಆಗತಾನೆ ಯುದ್ಧ ಮುಗಿದಿರುತ್ತದೆ. ಆ ಸಮಯದಲ್ಲಿ ಅತಿ ಹೆಚ್ಚು ಶ್ರೀಗಂಧ ಉತ್ಪತ್ತಿಯಾಗುತ್ತಿದ್ದ ಸ್ಥಳಗಳಲ್ಲಿ ನಮ್ಮ ಮೈಸೂರು ಇಡೀ ವಿಶ್ವಕ್ಕೇ ಮೊದಲನೇ ಸ್ಥಾನದಲ್ಲಿತ್ತು. ಯುದ್ಧಕ್ಕೆ ಬೇರೆ ಬೇರೆ ದೇಶಗಳಿಗೆ ಗಂಧದ ಮರ ರಫ್ತು ಮಾಡಲಾಗುತ್ತಿತ್ತು. ಯುದ್ಧದ ಸಂದರ್ಭದದಲ್ಲಿ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದ ಶ್ರೀಗಂಧದ ಮರಗಳ ಸರಕು ಮೈಸೂರಿನಲ್ಲಿ ಹಾಗೆಯೇ ಉಳಿದಿರುತ್ತದೆ. ಅಲ್ಲಿಯವರೆಗೂ ಶ್ರೀಗಂಧದ ಮರದಿಂದ ಯಾವುದೇ ಉತ್ಪನ್ನಗಳನ್ನು ತಯಾರಿಸುವ ಪ್ರವೃತ್ತಿ ಇರುವುದಿಲ್ಲ. ಆದರೆ ಆಗ ಏನಾದರೂ ಮಾಡಲೇಬೇಕಾದ ಕಾರಣ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅಂದಿನ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಉಪಾಯವೊಂದನ್ನ ಮಾಡಿದರು. 1916ರಲ್ಲಿ ಮೈಸೂರಿನಲ್ಲಿ ಶ್ರೀಗಂಧದೆಣ್ಣೆ ಕಾರ್ಖಾನೆಯನ್ನ ತೆರೆದರು. ಎರಡು ವರ್ಷ ಕಾರ್ಖಾನೆ ಸುಸೂತ್ರವಾಗಿಯೇ ನಡೆಯುತ್ತಿತ್ತು. ಆನಂತರ ಒಮ್ಮೆ ಅದೇ ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ ಶ್ರೀಗಂಧದೆಣ್ಣೆ ಬಳಸಿ ಸಾಬೂನನ್ನು ತಯಾರಿಸಿ ನಾಲ್ವಡಿಯವರಿಗೆ ವ್ಯಕ್ತಿಯೊಬ್ಬರು ಉಡುಗೊರೆ ನೀಡಿದರು.</p> <!-- /wp:paragraph --> <!-- wp:paragraph --> <p>ಆ ಒಂದು ಉಡುಗೊರೆ ಗಂಧದೆಣ್ಣೆಯಿಂದ ತಯಾರಾಗುವ ಉತ್ಪನ್ನಗಳಿಗೆ ಹೊಸ ಆಯಾಮವನ್ನೇ ನೀಡಿತು. ಆ ಉಡುಗೊರೆಯನ್ನು ನೋಡಿದ ನಂತರ ನಾಲ್ವಡಿಯವರು ಭಾರೀ ಖುಷಿಯಾಗಿದ್ದರು. ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರೊಂದಿಗೆ ಚರ್ಚಿಸಿ ಇದನ್ನು ನಾವ್ಯಾಕೆ ತಯಾರು ಮಾಡಬಾರದು ಎಂದು ಯೋಚಿಸಿದರು. ತಕ್ಷಣ ಇದರ ಕೆಲಸ ಶುರುವಾಯಿತು. ರಾಜ್ಯದಲ್ಲಿ ಗಂಧದೆಣ್ಣೆ ಬಳಸಿ ಸಾಬೂನು ತಯಾರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಯಿತು. ವಿಶ್ವೇಶ್ವರಯ್ಯನವರ ಗುರಿ ಇಷ್ಟೇ. ಜನಸಾಮಾನ್ಯರೂ ಕೊಳ್ಳಬಹುದಾದಂತಹ ಗಂಧದ ಸಾಬೂನನ್ನು ಉತ್ಪನ್ನ ಮಾಡಬೇಕು ಎಂಬುದು. ಇದಕ್ಕಾಗಿ ಬಾಂಬೆಯಿಂದ  ತಾಂತ್ರಿಕ ತಜ್ಞರನ್ನ ಕರೆಸಿ ಇದರ ಬಗ್ಗೆ ಸಂಶೋಧನೆ ಮಾಡಲು ಸೂಚನೆ ನೀಡಲಾಯಿತು. ಇವೆಲ್ಲಾ ನಡೆಯುತ್ತಿದ್ದುದು ಭಾರತೀಯ ವಿಜ್ಞಾನ ಸಂಸ್ಥೆ, ಅಂದರೆ  Indian Institute Of Scienceನಲ್ಲಿ.  ಅಲ್ಲಿ ನಡೆಯುತ್ತಿದ್ದ ಸಂಶೋಧನೆಯ ಸಂದರ್ಭದಲ್ಲಿ ಅಲ್ಲಿದ್ದ ಅಪ್ರತಿಮ ಬುದ್ಧಿವಂತ ವಿಜ್ಞಾನಿಯೊಬ್ಬರನ್ನು ವಿಶ್ವೇಶ್ವರಯ್ಯ ಗುರುತಿಸಿದರು. ಅವರೇ ಶಾಸ್ತ್ರಿ. ಅವರನ್ನ ಪ್ರೀತಿಯಿಂದ ಸೋಪ್ ಶಾಸ್ತ್ರಿ ಎಂದೇ ಕರೆಯುತ್ತಾರೆ. ಅವರ ಪ್ರತಿಭೆ ಗುರುತಿಸಿದ ವಿಶ್ವೇಶ್ವರಯ್ಯ ಅವರು ಸೋಪ್ ತಯಾರಿಸುವ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಶಾಸ್ತ್ರಿಯನ್ನ ಇಂಗ್ಲೆಂಡ್ ಗೆ ಕಳುಹಿಸುತ್ತಾರೆ. ವಿಶ್ವೇಶ್ವರಯ್ಯನವರಿಗೆ ಶಾಸ್ತ್ರಿ ನಿರಾಸೆ ಮಾಡಲಿಲ್ಲ. ಅವರ ಕನಸನ್ನ ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಾಸ್ತ್ರಿ ಇಂಗ್ಲೆಂಡ್ ನಿಂದ ಮರಳಿ ಬರಲು ನಾಲ್ವಡಿ ಹಾಗೂ ದಿವಾನರು ಕಾತುರರಾಗಿ ಕಾಯುತ್ತಿದ್ದರು. ಅಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಕಲಿತು ಬಂದ ಶಾಸ್ತ್ರಿ ಎಲ್ಲವನ್ನೂ ರಾಜರಿಗೆ ತಿಳಿಸಿದರು. ಆನಂತರವೇ ಬೆಂಗಳೂರಿನಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಶುರುವಾಗಿದ್ದು. ಅದೇ ಸಮಯದಲ್ಲಿ ಮೈಸೂರಿನಲ್ಲೂ ಸರ್ಕಾರಿ ಸೋಪ್ ಫ್ಯಾಕ್ಟರಿಯೊಂದು ಸ್ಥಾಪನೆಯಾಯಿತು. ಸ್ಯಾಂಡಲ್ ಸಾಬೂನು ಉತ್ಪಾದನೆಯಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ಉದ್ದೇಶ ಇದರ ಹಿಂದಿನದು. 1944ರಲ್ಲಿ ಶಿವಮೊಗ್ಗದಲ್ಲೂ ಕಾರ್ಖಾನೆಯೊಂದು ಸ್ಥಾಪನೆಯಾಯಿತು.   </p> <!-- /wp:paragraph --> <!-- wp:image {"id":240,"width":423,"height":158} --> <figure class="wp-block-image is-resized"><img src="https://nammamysuru.info/wp-content/uploads/2019/05/ksdl-founders-compressed_0.jpg" alt="" class="wp-image-240" width="423" height="158"/><figcaption> ನಾಲ್ವಡಿ ಕೃಷ್ಣರಾಜ ಒಡೆಯರ್ , ಸರ್.ಎಂ.ವಿಶ್ವೇಶ್ವರಯ್ಯ , ಶಾಸ್ತ್ರಿ </figcaption></figure> <!-- /wp:image --> <!-- wp:paragraph --> <p>ಒಮ್ಮೆ ಗಂಧದ ಸಾಬೂನು ಮಾರುಕಟ್ಟೆ ಪ್ರವೇಶಿಸಿದ ತಕ್ಷಣ ಅದೊಂದು ಕ್ರಾಂತಿಯಾಯಿತು. ಜನರು ಇಷ್ಟಪಟ್ಟು ಸ್ಯಾಂಡಲ್ ಸಾಬೂನುಗಳನ್ನು ಕೊಳ್ಳಲು ಶುರುಮಾಡಿದರು. ಬರೀ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಜನ ಇದರೆಡೆಗೆ ತಿರುಗಿನೋಡಿ ಇದನ್ನ ಕೊಳ್ಳುವಂತಾಯಿತು. ಆಗಿನ ಕಾಲದಲ್ಲಿ ಸಾಬೂನುಗಳು ಸಾಮಾನ್ಯವಾಗಿ ಒಂದೇ ಆಕಾರದಲ್ಲಿ ಬರುತ್ತಿತ್ತು. ಹೊಸದೇನನ್ನಾದರೂ ಮಾಡಲು ಮನಸ್ಸು ಮಾಡಿದ ಶಾಸ್ತ್ರಿಯವರು ಸಾಬೂನಿಗೆ ರೆಕ್ಟ್ಯಾಂಗಲ್ ಆಕಾರ ಕೊಟ್ಟರು. ಅದರ ಪ್ಯಾಕಿಂಗ್ ಗೆ ಪಾರಂಪರಿಕ ಸ್ಪರ್ಷ ಕೊಟ್ಟರು. ಅದರ ಡಬ್ಬಿ ಒಡವೆಗಳನ್ನು ಹಾಕಿಡುವ ಪೆಟ್ಟಿಗೆಯನ್ನು ಹೋಲುತ್ತಿತ್ತು. ಸೋಪನ್ನು ಒಡವೆಯನ್ನಿರಿಸುವ ತೆಳು ಕವರಿನಲ್ಲಿ ಪ್ಯಾಕ್ ಮಾಡಲಾಯಿತು.  ಅದರ ಬಣ್ಣ ಹಾಗೂ ವಿನ್ಯಾಸ ಅತ್ಯಂತ ಸುಂದರವಾಗಿ, ನೋಡಿದೊಡನೆ ಪಾರಂಪರಿಕ ಭಾವನೆ ಕೊಡುವಂತಿತ್ತು. ಸಾಬೂನು ಕೂಡಾ ಮೊಟ್ಟೆಯ ಆಕಾರದಲ್ಲಿ ಮಾಡಲಾಗಿತ್ತು. ಅದರ ಮಧ್ಯದಲ್ಲಿ ಸಂಸ್ಥೆಯ ಗುರುತು ಇರಿಸಲಾಗುತ್ತಿತ್ತು. ಅದರಲ್ಲಿರುವ ಗುರುತು ಶರಬನದ್ದು. ಶರಬ ಅಂದರೆ ಆನೆಯ ತಲೆ ಹಾಗೂ ಸಿಂಹದ ದೇಹವನ್ನು ಹೊಂದಿರುವ ಪ್ರಾಣಿ. ಇದು ಭಾರತದ ಜಾನಪದ ಹಾಗೂ ಪೌರಾಣಿಕ ಕಥೆಗಳಲ್ಲಿ ಕಾಣಸಿಗುವ ಪ್ರಾಣಿ. ಇದು ಆನೆಯ ಗಾಂಭೀರ್ಯ ಹಾಗೂ ಸಿಂಹದ ಶಕ್ತಿಯ ಸಂಕೇತ. ಇದು ನಮ್ಮ ಭವ್ಯ ಪರಂಪರೆಯ ಸಂಕೇತವೂ ಹೌದು. ಜೊತೆಗೆ ಅದರಲ್ಲಿ ‘ಶ್ರೀಗಂಧ ತವರಿನಿಂದ’ ಎಂದು ಪ್ರತಿ ಪ್ಯಾಕ್ ಮೇಲೂ ಬರೆಯಲಾಗುತ್ತಿತ್ತು. ಈ ಸಾಬೂನಿಗೆ ಪ್ರಚಾರ ಕೊಡಲು ಕರಾಚಿಯಲ್ಲಿ ಒಂಟೆಗಳ ಮೆರವಣಿಗೆಯನ್ನೂ ಮಾಡಿಸಲಾಗುತ್ತಿತ್ತಂತೆ. ಜೊತೆಗೆ ರಸ್ತೆಬದಿಯಲ್ಲಿ ದೊಡ್ಡ ದೊಡ್ಡ ಬೋರ್ಡ್ ಗಳನ್ನು ಹಾಕಲಾಗುತ್ತಿತ್ತಂತೆ. ಇದರಿಂದ ಮನಸೂರೆಗೊಂಡ ಇಡೀ ರಾಜ್ಯದ ಹಾಗೂ ವಿಶ್ವದ ಜನ ಇದನ್ನ ಕೊಳ್ಳಲು ಶುರುಮಾಡಿದರು. ನಂತರ 1980ರಲ್ಲಿ ಆಯಿಲ್ ಎಕ್ಸ್’ಟ್ರಾಕ್ಷನ್ ಘಟಕಗಳೊಂದಿಗೆ ಸೇರಿ ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜೆಂಟ್ಸ್ ಎಂಬ ಹೊಸ ಸಂಸ್ಥೆ ಶುರುವಾಯಿತು. ನಂತರ ಮೈಸೂರು ಸ್ಯಾಂಡಲ್ ಆಯಿಲ್, ಪೌಡರ್, ಅಗರಬತ್ತಿ, ವಿವಿಧ ಸುಗಂಧದ ಸಾಬೂನು, ಡಿಟರ್ಜೆಂಟ್ ಎಲ್ಲವೂ ಕೂಡಾ ತಯಾರಾಗಲು ಶುರುವಾಯಿತು. ಈಗಲೂ ಕೂಡಾ ಇವೆಲ್ಲಾ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೂ ಮೈಸೂರ್ ಸ್ಯಾಂಡಲ್ ನ ಕೇಂದ್ರ ಉತ್ಪನ್ನ ಮೈಸೂರು ಸ್ಯಾಂಡಲ್ ಸಾಬೂನು.  </p> <!-- /wp:paragraph --> <!-- wp:image {"id":241,"width":216,"height":148} --> <figure class="wp-block-image is-resized"><img src="https://nammamysuru.info/wp-content/uploads/2019/05/vin1.jpg" alt="" class="wp-image-241" width="216" height="148"/></figure> <!-- /wp:image --> <!-- wp:paragraph --> <p>ಮೈಸೂರು ಸ್ಯಾಂಡಲ್ ಸಾಬೂನು ಇಂದಿಗೂ ಕೂಡಾ ಸಂಪೂರ್ಣ ಶ್ರೀಗಂಧದಿಂದ ತಯಾರಾಗುವ ವಿಶ್ವದ ಏಕೈಕ ಸಾಬೂನು ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ಇದು ಪ್ರವಾಸಿಗರ ಅಚ್ಚುಮೆಚ್ಚು. ಜೊತೆಗೆ ನಮ್ಮ ಪರಂಪರೆಯ ಹೆಮ್ಮೆಯ ಪ್ರತೀಕ. ಈ ಸಾಬೂನಿಗೆ ವಿವಿಧ ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ. ಗಂಧದ ಉತ್ಪಾದನೆ ಕಡಿಮೆಯಾದರೂ ಗಂಧದ ಉತ್ಪನ್ನಗಳ ಉತ್ಪಾದನೆ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದರ ಸುಗಂಧ ಮೀರಿಸಲು ಇನ್ನೂ ಯಾವ ಉತ್ಪನ್ನಕ್ಕೂ ಸಾಧ್ಯವಾಗಿಲ್ಲ. ಮೈಸೂರು ಸ್ಯಾಂಡಲ್ ಸಾಬೂನು ಎಲ್ಲೆಡೆ ಸಿಗುತ್ತದೆ. ನೀವೂ ಇಂದೇ ಕೊಂಡು ಅದನ್ನ ಬಳಸಿದರೆ ಅದರ ಭವ್ಯ ಇತಿಹಾಸದ ಪಾತ್ರವಾದಂತೆ ಭಾಸವಾಗುತ್ತದೆ.</p> <!-- /wp:paragraph -->
233 Views

ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ನಿತ್ಯಕ್ರಮಗಳನ್ನ ಮುಗಿಸಿ ಚೆನ್ನಾಗಿ ರೆಡಿಯಾಗಿ ಕೆಲಸಕ್ಕೋ, ಸ್ಕೂಲಿಗೋ, ಕಾಲೇಜಿಗೋ ಹೊರಟರೆ ದಿನ ಚೆಂದವಾಗಿರುತ್ತೆ. ಆದರೆ ಈಗ ಎಲ್ಲರೂ ಅವಸರದಲ್ಲಿ ಬದುಕುತ್ತಾರೆ. ಮನೆಗೆ ಬರುವುದು, ಕೆಲಸ ಮುಗಿಸಿ ಮಲಗುವುದು, ಬೆಳಿಗ್ಗೆ ಏಳುವುದೂ ತಡವಾಗುತ್ತದೆ. ಆ ಕಾರಣಕ್ಕೆ ಎಷ್ಟೋ ಜನ ಎದ್ದು ಸ್ನಾನ ಮಾಡುವ ಗೋಜಿಗೂ ಹೋಗುವುದಿಲ್ಲ. ಮುಖ ತೊಳೆದು ಡಿಯೋಡ್ರೆಂಟ್ ಹಾಕಿ ಕೆಲಸಕ್ಕೆ ಓಡುತ್ತಾರೆ. ಇದು ಸಾಮಾನ್ಯವಾಗಿ ಇಂದಿನ ಪೀಳಿಗೆಯ ಜನರ ದಿನಚರಿ. ಆದರೆ ಮೈಸೂರಿಗರ ದಿನಚರಿ ಹೀಗಿರುವುದಿಲ್ಲ ನೋಡಿ.. ಬಹುಪಾಲು ಮೈಸೂರಿಗರು ಯಾವುದಕ್ಕೂ ಹರಿಬರಿ ಮಾಡಿಕೊಳ್ಳುವುದಿಲ್ಲ. ಹೋಗುವ ಸ್ಥಳಕ್ಕೆ ಒಂದ್ಹತ್ತು ನಿಮಿಷ ತಡವಾಗಿ ತಲುಪಿದರೂ ಪರವಾಗಿಲ್ಲ, ಮಾಡುವ ಕೆಲಸವನ್ನೆಲ್ಲಾ ಮುಗಿಸಿ ಶಾಂತಿಯಿಂದ ಹೋಗಬೇಕಾದ ಸ್ಥಳಕ್ಕೆ ಹೋಗುತ್ತಾರೆ.

ಇಷ್ಟೆಲ್ಲಾ ಹೇಳಿದ್ದು ಯಾಕೆ ಅಂದರೆ ಮೈಸೂರು ಜನರಿಗೆ ದಿನ ಸಂಪೂರ್ಣವಾಗಿ, ಉಲ್ಲಾಸಭರಿತವಾಗಿ ಶುರುವಾಗಿದೆ ಅನ್ನಿಸೋದು ಯಾವುದೋ ದುಬಾರಿ ಸುಗಂಧದ್ರವ್ಯಗಳನ್ನು ಪೂಸಿಕೊಂಡು ದಿನವನ್ನ ಶುರುಮಾಡಿದಾಗಲಲ್ಲ. ಬದಲಿಗೆ ಮೈಸೂರು ಸ್ಯಾಂಡಲ್ ಸಾಬೂನಿನಿಂದ ಸ್ನಾನ ಮಾಡಿ ಮನೆಯಿಂದ ಹೊರಟಾಗ. ಆಹಾ..! ಆ ಮೃದು ತ್ವಚೆ, ನುಣುಪಾದ ದೇಹ, ಅತ್ಯಂತ ಸುಗಂಧಭರಿತ ಶ್ರೀಗಂಧದ ವಾಸನೆ..ಇಷ್ಟೆಲ್ಲಾ ಒಟ್ಟಿಗೆ ಸಿಗೋದು ನಮ್ಮ ಮೈಸೂರು ಸ್ಯಾಂಡಲ್ ಸೋಪ್ ನಲ್ಲಿ ಮಾತ್ರ. ಮೈಸೂರು ಬ್ರ್ಯಾಂಡ್ ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಕೂಡಾ ಪ್ರಮುಖವಾದುದು. ಸ್ಯಾಂಡಲ್ ಸಾಬೂನು ಮಾತ್ರವಲ್ಲ, ಗಂಧದ ಎಣ್ಣೆ, ಪೌಡರ್, ಡಿಟರ್ಜೆಂಟ್, ಅಗರಬತ್ತಿಗಳು ಕೂಡಾ ಸಿಗುತ್ತವೆ. ಮೈಸೂರಿನ ಭವ್ಯ ಇತಿಹಾಸ ಬಿಂಬಿಸುವ ಈ ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೇ ಪ್ರತ್ಯೇಕವಾದ, ಬರೋಬ್ಬರಿ 102 ವರ್ಷಗಳ ಇತಿಹಾಸ ಇದೆ.

ಅದು ಮೊದಲನೇ ಮಹಾಯುದ್ಧ ಸಮಯ. ಆಗತಾನೆ ಯುದ್ಧ ಮುಗಿದಿರುತ್ತದೆ. ಆ ಸಮಯದಲ್ಲಿ ಅತಿ ಹೆಚ್ಚು ಶ್ರೀಗಂಧ ಉತ್ಪತ್ತಿಯಾಗುತ್ತಿದ್ದ ಸ್ಥಳಗಳಲ್ಲಿ ನಮ್ಮ ಮೈಸೂರು ಇಡೀ ವಿಶ್ವಕ್ಕೇ ಮೊದಲನೇ ಸ್ಥಾನದಲ್ಲಿತ್ತು. ಯುದ್ಧಕ್ಕೆ ಬೇರೆ ಬೇರೆ ದೇಶಗಳಿಗೆ ಗಂಧದ ಮರ ರಫ್ತು ಮಾಡಲಾಗುತ್ತಿತ್ತು. ಯುದ್ಧದ ಸಂದರ್ಭದದಲ್ಲಿ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದ ಶ್ರೀಗಂಧದ ಮರಗಳ ಸರಕು ಮೈಸೂರಿನಲ್ಲಿ ಹಾಗೆಯೇ ಉಳಿದಿರುತ್ತದೆ. ಅಲ್ಲಿಯವರೆಗೂ ಶ್ರೀಗಂಧದ ಮರದಿಂದ ಯಾವುದೇ ಉತ್ಪನ್ನಗಳನ್ನು ತಯಾರಿಸುವ ಪ್ರವೃತ್ತಿ ಇರುವುದಿಲ್ಲ. ಆದರೆ ಆಗ ಏನಾದರೂ ಮಾಡಲೇಬೇಕಾದ ಕಾರಣ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅಂದಿನ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಉಪಾಯವೊಂದನ್ನ ಮಾಡಿದರು. 1916ರಲ್ಲಿ ಮೈಸೂರಿನಲ್ಲಿ ಶ್ರೀಗಂಧದೆಣ್ಣೆ ಕಾರ್ಖಾನೆಯನ್ನ ತೆರೆದರು. ಎರಡು ವರ್ಷ ಕಾರ್ಖಾನೆ ಸುಸೂತ್ರವಾಗಿಯೇ ನಡೆಯುತ್ತಿತ್ತು. ಆನಂತರ ಒಮ್ಮೆ ಅದೇ ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ ಶ್ರೀಗಂಧದೆಣ್ಣೆ ಬಳಸಿ ಸಾಬೂನನ್ನು ತಯಾರಿಸಿ ನಾಲ್ವಡಿಯವರಿಗೆ ವ್ಯಕ್ತಿಯೊಬ್ಬರು ಉಡುಗೊರೆ ನೀಡಿದರು.

ಆ ಒಂದು ಉಡುಗೊರೆ ಗಂಧದೆಣ್ಣೆಯಿಂದ ತಯಾರಾಗುವ ಉತ್ಪನ್ನಗಳಿಗೆ ಹೊಸ ಆಯಾಮವನ್ನೇ ನೀಡಿತು. ಆ ಉಡುಗೊರೆಯನ್ನು ನೋಡಿದ ನಂತರ ನಾಲ್ವಡಿಯವರು ಭಾರೀ ಖುಷಿಯಾಗಿದ್ದರು. ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರೊಂದಿಗೆ ಚರ್ಚಿಸಿ ಇದನ್ನು ನಾವ್ಯಾಕೆ ತಯಾರು ಮಾಡಬಾರದು ಎಂದು ಯೋಚಿಸಿದರು. ತಕ್ಷಣ ಇದರ ಕೆಲಸ ಶುರುವಾಯಿತು. ರಾಜ್ಯದಲ್ಲಿ ಗಂಧದೆಣ್ಣೆ ಬಳಸಿ ಸಾಬೂನು ತಯಾರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಯಿತು. ವಿಶ್ವೇಶ್ವರಯ್ಯನವರ ಗುರಿ ಇಷ್ಟೇ. ಜನಸಾಮಾನ್ಯರೂ ಕೊಳ್ಳಬಹುದಾದಂತಹ ಗಂಧದ ಸಾಬೂನನ್ನು ಉತ್ಪನ್ನ ಮಾಡಬೇಕು ಎಂಬುದು. ಇದಕ್ಕಾಗಿ ಬಾಂಬೆಯಿಂದ  ತಾಂತ್ರಿಕ ತಜ್ಞರನ್ನ ಕರೆಸಿ ಇದರ ಬಗ್ಗೆ ಸಂಶೋಧನೆ ಮಾಡಲು ಸೂಚನೆ ನೀಡಲಾಯಿತು. ಇವೆಲ್ಲಾ ನಡೆಯುತ್ತಿದ್ದುದು ಭಾರತೀಯ ವಿಜ್ಞಾನ ಸಂಸ್ಥೆ, ಅಂದರೆ  Indian Institute Of Scienceನಲ್ಲಿ.  ಅಲ್ಲಿ ನಡೆಯುತ್ತಿದ್ದ ಸಂಶೋಧನೆಯ ಸಂದರ್ಭದಲ್ಲಿ ಅಲ್ಲಿದ್ದ ಅಪ್ರತಿಮ ಬುದ್ಧಿವಂತ ವಿಜ್ಞಾನಿಯೊಬ್ಬರನ್ನು ವಿಶ್ವೇಶ್ವರಯ್ಯ ಗುರುತಿಸಿದರು. ಅವರೇ ಶಾಸ್ತ್ರಿ. ಅವರನ್ನ ಪ್ರೀತಿಯಿಂದ ಸೋಪ್ ಶಾಸ್ತ್ರಿ ಎಂದೇ ಕರೆಯುತ್ತಾರೆ. ಅವರ ಪ್ರತಿಭೆ ಗುರುತಿಸಿದ ವಿಶ್ವೇಶ್ವರಯ್ಯ ಅವರು ಸೋಪ್ ತಯಾರಿಸುವ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಶಾಸ್ತ್ರಿಯನ್ನ ಇಂಗ್ಲೆಂಡ್ ಗೆ ಕಳುಹಿಸುತ್ತಾರೆ. ವಿಶ್ವೇಶ್ವರಯ್ಯನವರಿಗೆ ಶಾಸ್ತ್ರಿ ನಿರಾಸೆ ಮಾಡಲಿಲ್ಲ. ಅವರ ಕನಸನ್ನ ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಾಸ್ತ್ರಿ ಇಂಗ್ಲೆಂಡ್ ನಿಂದ ಮರಳಿ ಬರಲು ನಾಲ್ವಡಿ ಹಾಗೂ ದಿವಾನರು ಕಾತುರರಾಗಿ ಕಾಯುತ್ತಿದ್ದರು. ಅಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಕಲಿತು ಬಂದ ಶಾಸ್ತ್ರಿ ಎಲ್ಲವನ್ನೂ ರಾಜರಿಗೆ ತಿಳಿಸಿದರು. ಆನಂತರವೇ ಬೆಂಗಳೂರಿನಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಶುರುವಾಗಿದ್ದು. ಅದೇ ಸಮಯದಲ್ಲಿ ಮೈಸೂರಿನಲ್ಲೂ ಸರ್ಕಾರಿ ಸೋಪ್ ಫ್ಯಾಕ್ಟರಿಯೊಂದು ಸ್ಥಾಪನೆಯಾಯಿತು. ಸ್ಯಾಂಡಲ್ ಸಾಬೂನು ಉತ್ಪಾದನೆಯಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ಉದ್ದೇಶ ಇದರ ಹಿಂದಿನದು. 1944ರಲ್ಲಿ ಶಿವಮೊಗ್ಗದಲ್ಲೂ ಕಾರ್ಖಾನೆಯೊಂದು ಸ್ಥಾಪನೆಯಾಯಿತು.   

ನಾಲ್ವಡಿ ಕೃಷ್ಣರಾಜ ಒಡೆಯರ್ , ಸರ್.ಎಂ.ವಿಶ್ವೇಶ್ವರಯ್ಯ , ಶಾಸ್ತ್ರಿ

ಒಮ್ಮೆ ಗಂಧದ ಸಾಬೂನು ಮಾರುಕಟ್ಟೆ ಪ್ರವೇಶಿಸಿದ ತಕ್ಷಣ ಅದೊಂದು ಕ್ರಾಂತಿಯಾಯಿತು. ಜನರು ಇಷ್ಟಪಟ್ಟು ಸ್ಯಾಂಡಲ್ ಸಾಬೂನುಗಳನ್ನು ಕೊಳ್ಳಲು ಶುರುಮಾಡಿದರು. ಬರೀ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಜನ ಇದರೆಡೆಗೆ ತಿರುಗಿನೋಡಿ ಇದನ್ನ ಕೊಳ್ಳುವಂತಾಯಿತು. ಆಗಿನ ಕಾಲದಲ್ಲಿ ಸಾಬೂನುಗಳು ಸಾಮಾನ್ಯವಾಗಿ ಒಂದೇ ಆಕಾರದಲ್ಲಿ ಬರುತ್ತಿತ್ತು. ಹೊಸದೇನನ್ನಾದರೂ ಮಾಡಲು ಮನಸ್ಸು ಮಾಡಿದ ಶಾಸ್ತ್ರಿಯವರು ಸಾಬೂನಿಗೆ ರೆಕ್ಟ್ಯಾಂಗಲ್ ಆಕಾರ ಕೊಟ್ಟರು. ಅದರ ಪ್ಯಾಕಿಂಗ್ ಗೆ ಪಾರಂಪರಿಕ ಸ್ಪರ್ಷ ಕೊಟ್ಟರು. ಅದರ ಡಬ್ಬಿ ಒಡವೆಗಳನ್ನು ಹಾಕಿಡುವ ಪೆಟ್ಟಿಗೆಯನ್ನು ಹೋಲುತ್ತಿತ್ತು. ಸೋಪನ್ನು ಒಡವೆಯನ್ನಿರಿಸುವ ತೆಳು ಕವರಿನಲ್ಲಿ ಪ್ಯಾಕ್ ಮಾಡಲಾಯಿತು.  ಅದರ ಬಣ್ಣ ಹಾಗೂ ವಿನ್ಯಾಸ ಅತ್ಯಂತ ಸುಂದರವಾಗಿ, ನೋಡಿದೊಡನೆ ಪಾರಂಪರಿಕ ಭಾವನೆ ಕೊಡುವಂತಿತ್ತು. ಸಾಬೂನು ಕೂಡಾ ಮೊಟ್ಟೆಯ ಆಕಾರದಲ್ಲಿ ಮಾಡಲಾಗಿತ್ತು. ಅದರ ಮಧ್ಯದಲ್ಲಿ ಸಂಸ್ಥೆಯ ಗುರುತು ಇರಿಸಲಾಗುತ್ತಿತ್ತು. ಅದರಲ್ಲಿರುವ ಗುರುತು ಶರಬನದ್ದು. ಶರಬ ಅಂದರೆ ಆನೆಯ ತಲೆ ಹಾಗೂ ಸಿಂಹದ ದೇಹವನ್ನು ಹೊಂದಿರುವ ಪ್ರಾಣಿ. ಇದು ಭಾರತದ ಜಾನಪದ ಹಾಗೂ ಪೌರಾಣಿಕ ಕಥೆಗಳಲ್ಲಿ ಕಾಣಸಿಗುವ ಪ್ರಾಣಿ. ಇದು ಆನೆಯ ಗಾಂಭೀರ್ಯ ಹಾಗೂ ಸಿಂಹದ ಶಕ್ತಿಯ ಸಂಕೇತ. ಇದು ನಮ್ಮ ಭವ್ಯ ಪರಂಪರೆಯ ಸಂಕೇತವೂ ಹೌದು. ಜೊತೆಗೆ ಅದರಲ್ಲಿ ‘ಶ್ರೀಗಂಧ ತವರಿನಿಂದ’ ಎಂದು ಪ್ರತಿ ಪ್ಯಾಕ್ ಮೇಲೂ ಬರೆಯಲಾಗುತ್ತಿತ್ತು. ಈ ಸಾಬೂನಿಗೆ ಪ್ರಚಾರ ಕೊಡಲು ಕರಾಚಿಯಲ್ಲಿ ಒಂಟೆಗಳ ಮೆರವಣಿಗೆಯನ್ನೂ ಮಾಡಿಸಲಾಗುತ್ತಿತ್ತಂತೆ. ಜೊತೆಗೆ ರಸ್ತೆಬದಿಯಲ್ಲಿ ದೊಡ್ಡ ದೊಡ್ಡ ಬೋರ್ಡ್ ಗಳನ್ನು ಹಾಕಲಾಗುತ್ತಿತ್ತಂತೆ. ಇದರಿಂದ ಮನಸೂರೆಗೊಂಡ ಇಡೀ ರಾಜ್ಯದ ಹಾಗೂ ವಿಶ್ವದ ಜನ ಇದನ್ನ ಕೊಳ್ಳಲು ಶುರುಮಾಡಿದರು. ನಂತರ 1980ರಲ್ಲಿ ಆಯಿಲ್ ಎಕ್ಸ್’ಟ್ರಾಕ್ಷನ್ ಘಟಕಗಳೊಂದಿಗೆ ಸೇರಿ ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜೆಂಟ್ಸ್ ಎಂಬ ಹೊಸ ಸಂಸ್ಥೆ ಶುರುವಾಯಿತು. ನಂತರ ಮೈಸೂರು ಸ್ಯಾಂಡಲ್ ಆಯಿಲ್, ಪೌಡರ್, ಅಗರಬತ್ತಿ, ವಿವಿಧ ಸುಗಂಧದ ಸಾಬೂನು, ಡಿಟರ್ಜೆಂಟ್ ಎಲ್ಲವೂ ಕೂಡಾ ತಯಾರಾಗಲು ಶುರುವಾಯಿತು. ಈಗಲೂ ಕೂಡಾ ಇವೆಲ್ಲಾ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೂ ಮೈಸೂರ್ ಸ್ಯಾಂಡಲ್ ನ ಕೇಂದ್ರ ಉತ್ಪನ್ನ ಮೈಸೂರು ಸ್ಯಾಂಡಲ್ ಸಾಬೂನು.  

ಮೈಸೂರು ಸ್ಯಾಂಡಲ್ ಸಾಬೂನು ಇಂದಿಗೂ ಕೂಡಾ ಸಂಪೂರ್ಣ ಶ್ರೀಗಂಧದಿಂದ ತಯಾರಾಗುವ ವಿಶ್ವದ ಏಕೈಕ ಸಾಬೂನು ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ಇದು ಪ್ರವಾಸಿಗರ ಅಚ್ಚುಮೆಚ್ಚು. ಜೊತೆಗೆ ನಮ್ಮ ಪರಂಪರೆಯ ಹೆಮ್ಮೆಯ ಪ್ರತೀಕ. ಈ ಸಾಬೂನಿಗೆ ವಿವಿಧ ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ. ಗಂಧದ ಉತ್ಪಾದನೆ ಕಡಿಮೆಯಾದರೂ ಗಂಧದ ಉತ್ಪನ್ನಗಳ ಉತ್ಪಾದನೆ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದರ ಸುಗಂಧ ಮೀರಿಸಲು ಇನ್ನೂ ಯಾವ ಉತ್ಪನ್ನಕ್ಕೂ ಸಾಧ್ಯವಾಗಿಲ್ಲ. ಮೈಸೂರು ಸ್ಯಾಂಡಲ್ ಸಾಬೂನು ಎಲ್ಲೆಡೆ ಸಿಗುತ್ತದೆ. ನೀವೂ ಇಂದೇ ಕೊಂಡು ಅದನ್ನ ಬಳಸಿದರೆ ಅದರ ಭವ್ಯ ಇತಿಹಾಸದ ಪಾತ್ರವಾದಂತೆ ಭಾಸವಾಗುತ್ತದೆ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!